Powered By Blogger

ಸೋಮವಾರ, ಜೂನ್ 18, 2012

ಈ ಕೆಳಗೆ ಬರೆದಿರುವುದು ಈ ಮೇಲಿನ ವಿಷಯ


ಈ ಕೆಳಗೆ ಬರೆದಿರುವುದು ಈ ಮೇಲಿನ ವಿಷಯ


ಹ ಹ, ಸಲುಪಾ ಕನ್ ಫ್ಯೂಸ್ ಆದ್ರೆ ಸುಧಾರ್ಸ್ ಕಳಿ, ಈಮೇಲು ಅಂದ್ರೆ email, ಕನ್ನಡದಲ್ ಯೆಲ್ಲೋರೂ (ಸರಿ ಕೆಲವ್ರು) ಅದ್ಕ್ "ಮಿಂಚಂಚೆ" ಹೇಳ್ ಬೇರೆ ಕರ್ಯೂಲ್ ಶುರ್ ಮಾಡಿದ್ದ. ಆದ್ರೆ ಆನಂತೂ ಇದ್ರ್ ಒಪ್ಪೋಂವಲ್ಲ, ಯೆನ್ ತಕರಾರ್ ಇದ್ದೇ ಇದ್ದು.


ನೋಡಿ ಅಂಚೆ ಹೇಳು ಶಬ್ದಾನೇ ಹಂಸದಿಂದ ಬಂದದ್ದು, ಮಿಂಚಂಚೆ ಶಬ್ದ ಅಚ್ಚ ಕನ್ನಡ ದ ಶಬ್ದ ಹೌದಾದರೂ email ಗೆ ಸರಿ ಹೊಂದ್ ತಿಲ್ಲೆ. ಮಿಂಚು ಬಪ್ದು ಮಳ್ ಗಾಲದಲ್ಲಿ, ಈ ಹಂಸ ಮಳೇಲೇನಾದರು ಪತ್ರ ತಂದ್ರೆ ಅದೂ ಅದ್ರ್ ಚುಂಚಲ್ ಹಿಡ್ಕಂಡು (ಮನಸ್ನಲ್ಲೇ ಊಹಿಸ್ಕಳಿ).


ಇನ್ನು ಇದು ಬೇಗ್ ಶಿಕ್ತು ಹೇಳು ಕಾರಣಕ್ ಈ ಹೆಸ್ರ್ ಕೊಟ್ಟಿದ್ವನೋ ಹೇಳ್ ಕೇಳ್ದ್ರೆ ಅದ್ಕು ನನ್ ಒಪ್ಗಿಲ್ಲೆ. ಎಷ್ಟೊಂದ್ಸಲ ತಮ ನಿಂಗೊಂದ್ email ಹಾಕಿದ್ದಿದೆ ನೋಡು ಹೇಳ್ ಹೇಳ್ದ್ ಮೇಲೇ ಪ್ಯಾಟೀಗ್ ಹೋಗ್ mail ಚೆಕ್ ಮಾಡು ಪರಿಸ್ಥಿತಿನೂ ಇದ್ದು. ಅಲ್ಲದ್ರೂ ಈ ಕರಂಟು, ಕೆಟ್ ವರ್ಕು (ಆಗ್ಲೇ ಹೇಳ್ದಂಗೆ, ನೆಟ್ಟಗ್ ಓಡ್ ದಿದ್ದದ್ network ಆಗ್ತಿಲ್ಲೆ, ಹಾಂಗಾಗ್ ಅದು ಕೆಟ್ ವರ್ಕ್) ಇಲ್ಲದ್ರ್ ಕಂಪೂಟ್ರೂ ಕೆಲ್ಸ ಮಾಡ್ತಿಲ್ಲೆ, mail ಚೆಕ್ ಮಾಡೂಲು ಆಗ್ತಿಲ್ಲೆ, ಬರೀ ಮೇಲ್ ನೋಡ್ತಿಪ್ದೇಯಾ.


ಆ ವಿಷ್ಯ ಬದೀಗ್ ಇಡಿ. ಈಗ್ ಆನ್ ಹೇಳೂಲ್ ಬಂದದ್ ಬೇರೇದೆ ವಿಷ್ಯ, ಅದು ಈ ಮೇಲೆ ಹೇಳ್ದ ಈಮೇಲ್ ವಿಷ್ಯ, ನಿಂಗ್ಳ್ ಕಮೆಂಟೇನಾದ್ರೂ ಇದ್ರೆ ಆಮೇಲ್, ಈಮೇಲಲ್ ತಿಳ್ಸಿ


ಆಗದ್ ಎಂತದೂ ಅಂದ್ರೆ, ನಂದೊಂದ್ ಸಣ್ ಸರ್ಕಾರಿ ಕೆಲ್ಸ್ ಅಪ್ದಿತ್ತು, ಅದ್ರ್ ಬಗ್ ಅದೇ ಆಫೀಸ್ನಲ್ ಕೆಲ್ಸ ಮಾಡು ದೋಸ್ತ್ ಒಬ್ಬಂಗ್ ಫೋನ್ ಮಾಡಿ " ಯೆನ್ ಕೆಲ್ಸ್ ಇನ್ನೂ ಆಜಿಲ್ಯಲ, ಫೈಲ್ ಎಲ್ಲೋ ರಾಶೀ ಕೆಳ್ಗ್ ನೆಡದ್ದಕು, ಬಗೇಲ್ ಮೇಲ್ ಬಪ್ಪಾಂಗ್ ಮಾಡೊ" ಅಂದಿ ಹೇಳಾತು. ಆ ಪುಣ್ಯಾತ್ಮ ಎನ್ನತ್ರ ಹೇಳದ್ದೆಂತು ಗುತ್ತಿದ್ದ?


ನೀ ಅದ್ರ್ ಸುದ್ದಿ ಬಿಡ, ಕೆಲ್ಸ್ ಅಪ್ಪಾಂಗ್ ಮಾಡ್ತಿ, ಕೆಲ್ಸಾದ್ ಕೂಡ್ಲೆ ಮೇಲ್ ಹಾಕ್ತಿ ಹೇಳಿ. ಯಂಗ್ ತಲೆ ಪೂರಾ ಹಾಳಾತು, ಯೇ ಕೆಲ್ಸಾದ್ ಮೇಲ್ ಯೆಂತಕ್ಕೆ ಈಗ್ಲೆ ಮೇಲ್ ಹಾಕು ಆ ಫೈಲ್ ನ ಅಂದಿ. ಅಂವ್ ಅದ್ಕೆ, ಆಮೇಲ್ ಅಲ್ದೋ ಈಮೇಲು ಅಂದ. ಹಾಂಗೆ ಇದ್ರ್ ಕತೆ. ಅಂವ ಆಮೇಲ್ ಆ ಕೆಲ್ಸ ಮಾಡ್ತ್ನ ಇಲ್ಯ ಆದ್ರೆ ಈಮೇಲ್ ಅಂತೂ ಇನ್ನೂ ಬಂಜಿಲ್ಲೆ.


ಆಫೀಸ್ನಲ್ಲೂ ಹಾಂಗೇ ಆಗ್ತು, ಅವು ಯೆಲ್ಲಾ ಕೆಲ್ಸಕ್ಕೂ ಮೇಲ್ ಏ ಕಳ್ಸ್ತೆ ಹೇಳ್ತ, ಒಂದ್ ಮೀಟಿಂಗ್ ನಲ್ಲಿ ಆನ್ ಓಬ್ಜಕ್ಷನ್ ಮಾಡ್ದಿ ಹೇಳಾತು. ಯೆಲ್ಲಾ ಕೆಲ್ಸಕ್ಕೂ ಈ ಮೇಲ್ ಕಳ್ಸುದ್ ಸರಿಯಲ್ಲಾ ನಮ್ ಭಾರತದಲ್ಲಿ ಈಗ ಹೆಣ್ಮಕ್ಕೊ ಮುಂದ್ ವರದ್ದ, ಕೆಲು ಕೆಲ್ಸಕ್ ಫೀಮೇಲ್ ನೂ ಕಳ್ಸಿ ಬರೀ ಮೇಲ್ ಕಳ್ಸೂದ್ ಅಲ್ಲ ಹೇಳಿ. ಒಬ್ಬಂಗ್ ಅರ್ಥಾತಕು ಅಂವ್ ಮೆಲ್ ಗ ಯೆನ್ ಕಿವೀಲ್ ಅಂದ ಯೇ ಮೇಲ್ ಯಾವಾಗ್ಲೂ ಮೇಲೆಯಾ.




3 ಕಾಮೆಂಟ್‌ಗಳು: